ಸಂಬಂಧಗಳು ಸುಂದರವಾಗಿದ್ದಾಗ ನಾವು ಮಾಡಿದ್ದು, ಆಡಿದ್ದು ತಪ್ಪೇ ಆಗಿದ್ದರೂ ಅವೆಲ್ಲವೂ ಸರಿಯಾಗಿಯೇ ಕಾಣಿಸುತ್ತವೆ. ಅದೇ ಸಂಬಂಧಗಳು ಹಳಸಿರುವಾ ಅಥವಾ ಹಾಳಾಗಿದ್ದಾಗ ನಾವು ಮಾಡಿದ್ದು, ಹೇಳಿದ್ದು ಸರಿಯಾಗಿಯೇ ಇದ್ದರೂ ಕೂಡ ಅದು ತಪ್ಪಾಗಿ ಕಾಣಿಸುತ್ತವೆ ಎನ್ನುವ ಮಾತಿದೆ. ಹೌದು, ನಾವು ಏನನ್ನು ಮಾಡುತ್ತೇವೆ? ಏನನ್ನು ನೋಡುತ್ತೇವೆ? ಎನ್ನುವುದೆಲ್ಲವೂ ನಮ್ಮ ಭಾವನೆಯ ಮೇಲೆ ಆಧರಿಸಿಕೊಂಡಿರುತ್ತದೆ. ಹಾಗಾಗಿ ಪ್ರೀತಿಯಲ್ಲಿದ್ದಾರೆ ಎಂದ ಮಾತ್ರಕ್ಕೆ ಇಲ್ಲ ಸಲ್ಲದ ಮಾತುಗಳನ್ನು ಆಡುವುದು ಅಥವಾ ದ್ವೇಷದಲ್ಲಿದ್ದೇವೆ ಎಂದ ಮಾತ್ರಕ್ಕೆ ನಿಂದನೆ ಮಾಡುವ ಕೆಲಸಕ್ಕೆ ಹೋಗಬಾರದು. ನಮ್ಮಲ್ಲಿ ವಿಶಾಲ ಭಾವನೆ ಇರಬೇಕು. ಪ್ರತಿಯೊಬ್ಬರ ತಪ್ಪಿಗೂ ಕ್ಷಮಿಸುವ ಗುಣವನ್ನು ರೂಢಿಸಿಕೊಳ್ಳಬೇಕು. ಒಬ್ಬರನ್ನು ಅತಿಯಾಗಿ ಹೊಗಳುವುದು, ಇನ್ನೊಬ್ಬರನ್ನು ಅತಿಯಾಗಿ ದೂರುವ ಕೃತ್ಯ ಎಸಗಬಾರದು. ಸನ್ನಿವೇಶಗಳನ್ನು ಪರಾಮರ್ಶಿಸುವ ಸಾಮಥ್ರ್ಯದಿಂದ ಎಲ್ಲವನ್ನೂ ಅರಿತುಕೊಳ್ಳಬೇಕು. ಆಗ ಜೀವನ ಸಾರ್ಥಕ ಎನಿಸಿಕೊಳ್ಳುವುದು. ಸಮಾಜವೂ ನಮ್ಮನ್ನು ಗೌರವಿಸುವುದು. ಗುರುವಾರವಾದ ಇಂದು ಗುರು ರಾಯರ ಸ್ಮರಣೆಯಿಂದ ದಿನವನ್ನು ಆರಂಭಿಸಿ. ಈ ದಿನದಲ್ಲಿ ಉಂಟಾಗುವ ಆಗುಹೋಗುಗಳು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಲಿವೆ? ಎನ್ನುವುದನ್ನು ತಿಳಿಯಲು ಈ ವಿಡಿಯೋ ವೀಕ್ಷಿಸಿ.